ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಆರನೇ ವರ್ಷದ ಬ್ರಹ್ಮರಥೋತ್ಸವ
ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಆರನೇ ವರ್ಷದ ಬ್ರಹ್ಮರಥೋತ್ಸವ
ಬಸ್ರೂರು: ಇತಿಹಾಸ ಪ್ರಸಿದ್ಧ ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಆರನೇ ವರ್ಷದ ಬ್ರಹ್ಮರಥೋತ್ಸವ ಶ್ರೀ ಕಾಶೀ ಸಂಸ್ಥಾನ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಆಶೀರ್ವಾದಾನುಸಾರ ವಿಜೃಂಭಣೆಯಿಂದ ಜರುಗಿತು. ರಥೋತ್ಸವ ಸಂದರ್ಭ ಪ್ರತಿನಿತ್ಯ ಮಹಾಪೂಜೆ, ಸಮಾರಾಧನೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು, ಪೂಜೆ ಪುನಸ್ಕಾರಗಳು ಶಾಸ್ತ್ರೋಕ್ತವಾಗಿ ವೈದಿಕರ ನೇತೃತ್ವದಲ್ಲಿ ನಡೆದವು.
ಧ್ವಜಾವರೋಹಣದೊಂದಿಗೆ ಸಮಪನಗೊಂಡ ರಥೋತ್ಸವದಲ್ಲಿ ಚೂರ್ಣೋತ್ಸವ, ತೀರ್ಥ ಸ್ನಾನ, ಫಲಾವಳಿ ಏಲಂ, ಸಮಾರಾಧನೆ, ಮೃಗಬೇಟೆ ಉತ್ಸವ, ಕವಾಟ ಬಂಧನ ಮೊದಲಾದ ಯಥಾಯೋಗ್ಯ ಅನುಷ್ಟಾನಗಳು ವೈಭವಗಳೊಂದಿಗೆ ಜರುಗಿದವು.
ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಆರನೇ ವರ್ಷದ ಬ್ರಹ್ಮರಥೋತ್ಸವ |
ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಆರನೇ ವರ್ಷದ ಬ್ರಹ್ಮರಥೋತ್ಸವ |
ಕೃಪೆ: ಉದಯವಾಣಿ ವರದಿ.