Header Ads

ರವಿ ಬಸ್ರೂರ್ ಅವರಿಗೆ ಸನ್ಮಾನ



ರವಿ ಬಸ್ರೂರ್ ಅವರಿಗೆ ಸನ್ಮಾನ

ಬಸ್ರೂರು, ಜುಲೈ 14: 
       ಶ್ರೀ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ, ಬಸ್ರೂರು-ಬಳ್ಕೂರು ಇದರ ನೂತನ ಪದಗ್ರಹಣ ಸಮಾರಂಭದಲ್ಲಿ ಕುಂದಾಪ್ರ ಕನ್ನಡದ ಯಶಸ್ವೀ ಚಲನಚಿತ್ರ 'ಗರ್ಗರ್ ಮಂಡ್ಲ'ದ ನಿರ್ದೇಶಕ ರವಿ ಬಸ್ರೂರ್ ಅವರಿಗೆ ಸನ್ಮಾನ ಕಾರ್ಯಕ್ರಮ ಬಸ್ರೂರು ನಿವೇದಿತಾ ಪ್ರೌಢ ಶಾಲೆಯ ವಿಶಾಲಾಕ್ಷಿ ಎಂ. ಪೂಂಜಾ ಸಭಾಂಗಣದಲ್ಲಿ ನಡೆಯಿತು.

Basrur


       ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ರಂಗ ನಟ ಕೆ. ಎಸ್. ಶೇಖರ ಆಚಾರ್ ಅವರು ರವಿ ಬಸ್ರೂರ್ ದಂಪತಿಗಳನ್ನು ಫಲ-ಪುಷ್ಪ, ತಾಂಬೂಲ ಇತ್ತು, ಶಾಲು ಹೊದೆಸಿ ಸನ್ಮಾನಿಸಿದರು. ಅವರು ಮಾತನಾಡಿ ಕುಂದಾಪ್ರ ಕನ್ನಡ ತನ್ನದೇ ಸ್ವಂತಿಕೆ, ಸಹಜತ್ವ ಹೊಂದಿದೆ ಎಂಬುದನ್ನು ಜನತೆಗೆ ಬೆಳ್ಳಿಪರದೆಯ ಮೂಲಕ ತೋರಿಸಿದ ಹಿರಿಮೆ ರವಿ ಬಸ್ರೂರ್ ಅವರದು. ಅವರ ಸಾಧನೆ ಗಮನಾರ್ಹವಾದುದು ಎಂದರು.

       ಸನ್ಮಾನ ಸ್ವೀಕರಿಸಿದ ರವಿ ಬಸ್ರೂರ್ ಅವರು ಮಾತನಾಡಿ ಈ ಸಾಧನೆ ನನ್ನೊಬ್ಬನದೆ ಆಗಿರದೆ ಇಡೀ ತಂಡಕ್ಕೆ ಸಲ್ಲುತ್ತದೆ. ಕುಂದಾಪ್ರ ಕನ್ನಡಕ್ಕೆ ತನ್ನದೇ ಆದ ವಿಶಿಷ್ಟ ಶೈಲಿ ಇದ್ದು ಅದನ್ನು ತೆರೆಯ ಮೇಲೆ ತರುವ ಯತ್ನ ನನ್ನದಾಗಿದ್ದು ಅದೀಗ ನೆರವೇರಿದೆ ಎಂದರು.

       ಬಸ್ರೂರು, ಬಳ್ಕೂರು ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಜನಾರ್ದನ ಆಚಾರ್ಯ ಮಾರ್ಗೋಳಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಡಾ| ಅಶೋಕ್, ಕೊಣಿ ನಾರಾಯಣ ಆಚಾರ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

       ಈ ಸಂದರ್ಭ ಸಂಘದ ಅಧ್ಯಕ್ಷ ಜನಾರ್ದನ ಆಚಾರ್ಯ, ರಮೇಶ ಆಚಾರ್ಯ, ರಾಘವೇಂದ್ರ ಆಚಾರ್ಯ ಮತ್ತು ರಾಮಚಂದ್ರ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

       ರಾಮಚಂದ್ರ ಆಚಾರ್ಯ ಬಳ್ಕೂರು ವರದಿ ಮಂಡಿಸಿದರು. ರಾಘವೇಂದ್ರ ಆಚಾರ್ಯ ಲೆಕ್ಕ ಪತ್ರ ವರದಿ ಮಂಡಿಸಿದರು. ಡಾ| ರಮೇಶ್ ಆಚಾರ್ಯ ಕೋಳ್ಕೆರೆ ಪದಗ್ರಹಣ ನೆರವೇರಿಸಿದರು. ಬಳ್ಕೂರು ರಮೇಶ್ ಆಚಾರ್ಯ ಸ್ವಾಗತಿಸಿದರು. ಸರೋಜಿನಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ರಾಮಚಂದ್ರ ಆಚಾರ್ಯ ವಂದಿಸಿದರು.

ಆಧಾರ: ಉದಯವಾಣಿ.

Theme images by sndr. Powered by Blogger.