Header Ads

'ಮುಸ್ಕಿನ್ ಪಡಿ' ನಮ್ಮ ಭಾಷೆಗೆ ನನ್ನದೊಂದು ಕಿರು ಕಾಣಿಕೆ; ಹರೀಶ್ ಬಳ್ಕೂರ್ ಅವರೊಂದಿಗಿನ ಸಂದರ್ಶನ

ಕಳೆದ ಕೆಲವು ವರ್ಷಗಳಲ್ಲಿ ಅನೇಕ ಕುಂದಗನ್ನಡ ಚಲನಚಿತ್ರಗಳು, ಸಂಗೀತ, ವಿಡಿಯೋ ಆಲ್ಬಮ್ ಗಳು ಬಿಡುಗಡೆಯಾಗಿ ಜನಮೆಚ್ಚುಗೆ ಗಳಿಸಿವೆ.

ಕುಂಡಗನ್ನಡದ ಮೇಲಿರುವ ಪ್ರೀತಿ, ಭಾಷಾಭಿಮಾನ ಮತ್ತು ನಮ್ಮ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಪ್ರಯತ್ನ ನಿಜಕ್ಕೂ ಅಭಿನಂದನಾರ್ಹ. ಇದೇ ಸಾಲಿಗೆ ಸೇರ್ಪಡೆಗೊಳ್ಳುತ್ತಿರುವ ಇನ್ನೊಂದು ಚಿತ್ರ ಮುಸ್ಕಿನ್ ಪಡಿ.

Interview with "Muskin Padi" director Harish Balkur.

ಕಳೆದ ವರ್ಷ ತೆರೆ ಕಂಡಿದ್ದ ಊರ್ ಮನಿ ಗಂಡ್ ಚಿತ್ರದ ನಿರ್ದೇಶಕ ಹರೀಶ್ ಬಳ್ಕೂರ್ ರವರ ಎರಡನೇ ಪ್ರಯತ್ನವೇ ಮುಸ್ಕಿನ್ ಪಡಿ. ಈಗಾಗಲೇ ಟೀಸರ್ ಬಿಡುಗಡೆಗೊಳಿಸಿ ಕುತೂಹಲ ಮೂಡಿಸಿದೆ ಚಿತ್ರತಂಡ.

ಚಿತ್ರದ ನಿರ್ದೇಶಕ ಹರೀಶ್ ಬಳ್ಕೂರ್ ಅವರು ನಮ್ಮ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

"Maskin Padi" director Harish Balkur.

ಚಿತ್ರದ ಹೆಸರೇ ವಿಭಿನ್ನವಾಗಿದೆ. ಏನಿದು 'ಮುಸ್ಕಿನ್ ಪಡಿ'?

ಮುಸ್ಕಿನ್ ಪಡಿ ಅಂದ್ರೆ ಈಗಾಗಲೇ ಕುಂದಾಪ್ರ ಜನತೆ ಒಂದು ರೀತಿಯಲ್ಲಿ ಯೋಚನೆ ಮಾಡಿದ್ದಾರೆ. ಆ ಶಬ್ದಕ್ಕೆ ಈ ಚಿತ್ರದಲ್ಲಿ  ಬೇರೆ ರೀತಿಯಲ್ಲೆ  ಅರ್ಥ ಕೊಟ್ಟಿದ್ದೇನೆ. ಅದು ಸಿನಿಮಾದಲ್ಲೆ ನೋಡಿ.

ಕಥೆ, ಚಿತ್ರಕಥೆಯಲ್ಲಿ ಅಂತಹ ವಿಶೇಷತೆ ಏನಿದೆ?

ಕಥೆ, ಚಿತ್ರಕಥೆಯಲ್ಲಿ ವಿಶೇಷ ಅಂದ್ರೆ ಐದು ವಿಭಿನ್ನ ರೀತಿಯ ಕಥೆಯನ್ನ ಒಂದೇ ಚಿತ್ರದಲ್ಲಿ ಚಿತ್ರಕಥೆ ಮಾಡಿದ್ದೇವೆ, ಅದೇ ವಿಶೇಷ.

ಇದು ನೈಜ ಘಟನೆ ಆಧಾರಿಸಿದ ಚಿತ್ರ?

ಅಲ್ಲ. ಇದೂಂದು ಹೂಸರೀತಿಯ ಕಲ್ಪನೆ. ಮೂರು ಊರಿನ ಕಥೆ ಈ ಚಿತ್ರದಲ್ಲಿ ಬರತ್ತೆ. ಹಾಗೆಯೇ ತುಂಬಾ ಟೆರರಿಸಮ್ ಬಗೆಗಿನ ಚಿತ್ರ ಇದು.

ನಟ, ನಟಿ ಮತ್ತು ಇತರ ಪಾತ್ರಗಳ ಬಗ್ಗೆ?

ಚಿತ್ರದಲ್ಲಿ ಇಬ್ಬರು ನಾಯಕನಟರು, ಇಬ್ಬರು ನಾಯಕಿಯರು ಇದ್ದಾರೆ. ಚಿತ್ರದ ಮೂದಲ  ಭಾಗದಲ್ಲಿ ಇಬ್ಬರ ಕಥೆ ಬಂದ್ರೆ ಇಂಟೆರ್ವಲ್ ನಂತರ ಇಬ್ಬರ ಕಥೆ ಬರುತ್ತೆ.


ಚಿತ್ರದ ಟೀಸರ್ ಈಗಾಗಲೇ ಸದ್ದು ಮಾಡ್ತಿದೆ. ಅದರ ಬಗ್ಗೆ?

ಟೀಸರ್ ನಲ್ಲಿ  ಟೆರರಿಸಮ್ ಸನ್ನಿವೇಶಗಳನ್ನ ತೋರಿಸಿದ್ದೇವೆ. ಟೀಸರ್ ನೋಡಿ ಎಲ್ಲರು ಒಳ್ಳೆ ರೀತಿಯಾ ಮೆಚ್ಚುಗೆ ತೋರಿಸಿದ್ದಾರೆ. ಅದರ ಬಗ್ಗೆ  ಚಿತ್ರತಂಡಕ್ಕೆ ಹೆಮ್ಮೆ ಇದೆ.

ಕುಂದಾಪ್ರ ಕನ್ನಡ ಚಿತ್ರಗಳನ್ನೇ ಯಾಕೆ ಮಾಡ್ತಿರೋದು? ಅದರ ಉದ್ದೇಶ?

ನನ್ನ ಗುರಿಗೆ ನಮ್ಮ ತವರಿನ ಭಾಷೆ ದಾರಿ ತೋರಿಸಿ ಕೊಟ್ಟಿದೆ. ಎಷ್ಟೊ ಪ್ರತಿಭೆಗಳು ಈ ನಮ್ಮ ಕುಂದಾಪ್ರ ಭಾಷೆಯ ಉಳಿವಿಗಾಗಿ ಶ್ರಮ ಪಡ್ತಾಇದ್ದಾರೆ. ಹಾಗೆ ನನ್ನದು ಒಂದು ನಮ್ಮ ಭಾಷೆಗೆ ಕಿರು ಕಾಣಿಕೆ.

ನಿಮ್ಮ ಹಿಂದಿನ ಚಿತ್ರಕ್ಕಿಂತ ಇದು ಹೇಗೆ ವಿಭಿನ್ನ?

ನನ್ನ ಹಿಂದಿನ ಚಿತ್ರ ಊರ್ ಮನಿ ಗಂಡ್. ಅದು ನನ್ನ ಪ್ರತಿಭೆಯನ್ನ ಭೆಂಬಲಿಸಿದ ಬೆನಕ ಬಳ್ಕೂರ್ ಎಂಬ ಕಲಾ ಸಂಘದ ಕಲಾವಿದರನ್ನು ಕೂಡಿಕೊಂಡು ಮಾಡಿದ ನನ್ನ ಮೂದಲ ಪ್ರಯತ್ನ. ಆ ಚಿತ್ರದಲ್ಲಿ ಎಲ್ಲಾ ಕಲಾವಿದರು ಬಳ್ಕೂರ್ ನವರಿದ್ರು. ಆದರೆ ಈ ಚಿತ್ರದಲ್ಲಿ  ಎಲ್ಲಾ ಊರಿನ ಪ್ರತಿಭೆಗಳನ್ನ ತೋರಿಸಿದ್ದೇವೆ. ಮತ್ತೆ ಇದು ಬಹುವೆಚ್ಚದ ಸಿನಿಮಾ. ಹಾಗೇ ಒಬ್ಬರು ಸ್ಟಾರ್ ನಟರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಪೂರ್ಣ ಕನ್ನಡ ಚಿತ್ರಗಳನ್ನೂ ನಿರ್ದೇಶಿಸುವ ಯೋಚನೆ ಇದ್ಯಾ?

ಇವಾಗಲೇ ಇಲ್ಲಾ. ಈ ಚಿತ್ರ ಅಲ್ಲದೆ, ಇನ್ನೊಂದು ಕುಂದಾಪ್ರ ಭಾಷೆಯ ಸಿನಿಮಾ ಮಾಡುತ್ತೇನೆ. ಆಮೇಲೆ ನೋಡಬೇಕು. ಈಗಾಗಲೆ "ಪ್ರೇಮ ವೇ ನೀನು ಕ್ಷೇಮವೇ" ಎನ್ನುವ ಕನ್ನಡ ಸಿನಿಮಾಕ್ಕೆ ಸಾಹಿತ್ಯ ಬರೆದಿದ್ದೇನೆ.

ಕುಂದಾಪ್ರ ಜನತೆಗೆ ನಿಮ್ಮ ಸಂದೇಶ?

ನಮ್ಮ ಕುಂದಾಪ್ರ ಜನತೆ ಕಲೆಗೆ ತುಂಬಾನೇ ಸಾಥ್ ಕೊಡುತ್ತಾರೆ. ಏನೇ ಒಂದು ಪ್ರತಿಭೆ ಇದ್ರು ಅದು ನಮ್ಮ ಕುಂದಾಪ್ರದಲ್ಲಿ ಇದೆ.

ರಿಲೀಸ್ ಯಾವಾಗ? ಎಲ್ಲಿಲ್ಲಿ ರಿಲೀಸ್ ಮಾಡೋ ಯೋಚನೆ ಇದೆ?

ಈ ಚಿತ್ರವನ್ನ ಮೂರು ಚಿತ್ರಮಂದಿರಗಳಲ್ಲಿ ಬಿಡುಗಡೆಮಾಡುವ ಯೋಚನೆ ಇದೆ.

ಚಿತ್ರದ ಟೀಸರ್:


ಒಟ್ಟಿನಲ್ಲಿ ಒಂದೊಳ್ಳೆ ಪ್ರಯತ್ನ, ಉದ್ದೇಶದೊಂದಿಗೆ ತೆರೆಗೆ ಬರುತ್ತಿರುವ ಮುಸ್ಕಿನ್ ಪಡಿ ಚಿತ್ರ ಭರ್ಜರಿ ಪ್ರದರ್ಶನ ಕಾಣಲಿ, ನಮ್ಮ ಕುಂದಾಪ್ರದ ಪ್ರತಿಭೆಗಳಿಗೆ ಇನ್ನಷ್ಟು ಅವಕಾಶ ಕಲ್ಪಿಸಲಿ ಎಂದು ಹಾರೈಸೋಣ.

Theme images by sndr. Powered by Blogger.