Header Ads

ಬಸ್ರೂರು ನಿವೇದಿತಾ ಪ್ರೌಢ ಶಾಲೆ: ಕುಸ್ತಿ ಪಂದ್ಯ ಉದ್ಘಾಟನೆ



ಬಸ್ರೂರು: ಕುಸ್ತಿ ಪಂದ್ಯ ಉದ್ಘಾಟನೆ

ಬಸ್ರೂರು, ಜುಲೈ 25:
         ಸಾರ್ವಜನಿಕ ಶಿಕ್ಷಣ ಇಲಾಖೆ, ಕುಂದಾಪುರ ಹಾಗೂ ನಿವೇದಿತಾ ಪ್ರೌಢ ಶಾಲೆ ಬಸ್ರೂರಿನಲ್ಲಿ ನಡೆಸಲು ಆಯೋಜಿಸಿರುವ ಕುಂದಾಪುರ ವಲಯ ಮಟ್ಟದ ಪ್ರೌಢ ಶಾಲೆ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕುಸ್ತಿ ಪಂದ್ಯವನ್ನು ಕುಂದಾಪುರ ಭಂಡಾರ್‌ಕರ್ಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶಂಕರನಾರಾಯಣ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು.

Basrur

       ಬಳಿಕ ಅವರು ಮಾತನಾಡಿ ಶಾಲಾ ಕಾಲೇಜುಗಳಲ್ಲಿ ಕುಸ್ತಿ ಪಂದ್ಯ ಮಹತ್ವ ಪಡೆಯುತ್ತದೆ. ಕೇವಲ ದೈಹಿಕ ಸಾಮರ್ಥ್ಯದ ಪ್ರದರ್ಶನವಷ್ಟೇ ಕುಸ್ತಿಯ ಉದ್ದೇಶ. ದೈಹಿಕ ಮಾನಸಿಕ ಸಮತೋಲನದಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ ಎಂದರು.

      ನಿವೇದಿತಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ದಿನಕರ ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಕ್ರೀಡಾಳುಗಳಿಗೆ ಕುಸ್ತಿಯ ಮಹತ್ವ ವಿವರಿಸಿದರು. ಬಸ್ರೂರು ಶಾರದಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸೂರಜ್ ಕುಮಾರ್ ಶೆಟ್ಟಿ, ಜಯಪ್ರಸಾದ್ ಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ದತ್ತಾತ್ರೇಯ ನಾಯಕ್, ಪದ್ಮಾವತಿ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

     ಕೆ. ಎಸ್. ಮಂಜುನಾಥ್ ಸ್ವಾಗತಿಸಿ, ರಾಜಾರಾಮ ಶೆಟ್ಟಿ ವಂದಿಸಿದರು.

ಚಿತ್ರ ಮತ್ತು ವರದಿ: ಉದಯವಾಣಿ.

Theme images by sndr. Powered by Blogger.